ಸಾಧನೆಗಳು

ಸಾಧನೆಗಳು

 • ವಿದುಷಿ ಡಾ.ಗೀತಾ ಸೀತಾರಾಮ್ ಎಂ.ಎ (ಸೈಕಾಲಜಿ), ಬಿ.ಲಿಬ್.ಎಸ್ಸಿ ಮತ್ತು ವಿದ್ವತ್ (ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ)ಯಲ್ಲಿ ರ್ಯಾಂಕ್ ವಿಜೇತೆ.
 • 35 ವರ್ಷಗಳ ಕೇಂದ್ರ ಸರ್ಕಾರದ ಸೇವೆಯ ನಂತರ ಮುಖ್ಯ ಗ್ರಂಥಪಾಲಕಿ ಹಾಗೂ ಸಂಸ್ಥೆಯ ಉಪನಿರ್ದೇಶಕಿಯಾಗಿ ಸಿ.ಎಫ್.ಟಿ.ಆರ್.ಐ. (ಕೇಂದ್ರ ಆಹಾರ ವಿಜ್ಞಾನ ಮತ್ತು ಸಂಶೋಧನಾಲಯ) ಮೈಸೂರಿನಿಂದ ನಿವೃತ್ತಿ ಹೊಂದಿದ್ದಾರೆ.
 • ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ‘ಬಿಬ್ಲಿಯೋಮೆಟ್ರಿಕ್ಸ್’ ಎಂಬ ಅಪರೂಪದ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿದ್ದಾರೆ.
 • ಇಪ್ಪತ್ತು ವರ್ಷಗಳ ಅವಧಿಯಲ್ಲಿ ವಿದುಷಿ ಡಾ.ಗೀತಾ ಸೀತಾರಾಮ್‍ರವರು ಆರು ಹೊಸ ರಾಗಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ನೀಡಿದ್ದಾರೆ. (1) ದೀಪದರ್ಶಿನಿ (14ನೇ ವಕುಳಾಭರಣದಲ್ಲಿ ಜನ್ಯ) (2) ಜಯಸಿಂಹ (42ನೇ ರಘುಪ್ರಿಯದಲ್ಲಿ ಜನ್ಯ) (3) ದಯಾದ್ಯುತಿ (45ನೇ ಶುಭಪಂತುವರಾಳಿಯಲ್ಲಿ ಜನ್ಯ) (4) ಶಿವದೀಪ್ತಿ (72ನೇ ರಸಿಕಪ್ರಿಯದಲ್ಲಿ ಜನ್ಯ) (5) ಶಾಂತಿಬ್ರಹ್ಮ (26ನೇ ಚಾರುಕೇಶಿಯಲ್ಲಿ ಜನ್ಯ) ಮತ್ತು (6) ಸಚ್ಚಿದ್ರೂಪ (66ನೇ ಚಿತ್ರಾಂಬರಿಯಲ್ಲಿ ಜನ್ಯ).
 • ಡಾ.ಗೀತಾರವರ ಕರ್ನಾಟಕ ಸಂಗೀತ ಹಾಗೂ ನೃತ್ಯಪರವಾದ 101 ಸ್ವಂತ ರಚನೆಗಳನ್ನು ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ (ಕರ್ನಾಟಕ ಸರ್ಕಾರ) ತನ್ನ ‘ಪುಸ್ತಕ ಅನುದಾನ’ ಯೋಜನೆಯಲ್ಲಿ 2015ರಲ್ಲಿ ಪ್ರಕಟಿಸಿದೆ. ಇದರಲ್ಲಿರುವ ರಚನೆಗಳು ಸಂಸ್ಕøತ, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿವೆ. (ಸಂಗೀತಪರ ಪ್ರಕಟಣೆಗಳು ವಿಭಾಗದ ‘ನಾದ ನುಡಿ ಸೌರಭ’ ನೋಡಿ).
 • ಡಾ.ಗೀತಾರವರು 10 ಕಾದಂಬರಿಗಳು, 4 ಕಥಾಸಂಕಲನಗಳು, 6 ನಾಟಕಗಳು, ಎರಡು ಸಂಪಾದಿತ ಕೃತಿಗಳು, 1 ಪ್ರವಾಸ ಕಥನ, 1 ವಿಮರ್ಶಾತ್ಮಕ ಪ್ರಬಂಧ, 2 ಶಿಶುಸಾಹಿತ್ಯಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಮೂರು ಅನುವಾದಗಳೂ ಸೇರಿವೆ. ಟಿ.ಪಿ.ಕೈಲಾಸಂ ರವರ ಆಂಗ್ಲನಾಟಕ ‘ದ ಬ್ರಾಹ್ಮಿನ್ಸ್ ಕರ್ಸ್’ನ ಕನ್ನಡ ಅನುವಾದ ‘ಶಾಪ’; ಕಲ್ಕಿ ಕೃಷ್ಣಮೂರ್ತಿಯವರ ತಮಿಳು ಐತಿಹಾಸಿಕ ಕಾದಂಬರಿ ‘ಪಾರ್ತಿಬನ್ ಕನವು’ನ ಕನ್ನಡ ಅನುವಾದ ‘ಕನಸು ಕಂಡ ಚೋಳರಸ ಪಾರ್ತಿಬ’ ಮತ್ತು ಚಾ.ವಿಶ್ವನಾಥನ್‍ರ ತಮಿಳು ಹಾಸ್ಯ ಕಾದಂಬರಿ ‘ವಾಷಿಂಗ್‍ಟನ್ನಿಲ್ ತಿರುಮಣಂ’ನ ಕನ್ನಡ ಅನುವಾದ ‘ವಾಷಿಂಗ್‍ಟನ್ನಲ್ಲಿ ವಿವಾಹ’.
 • ‘ತ್ಯಾಗರಾಜ ರಾಮಾಯಣ’ ಎಂಬ ಸಂಗೀತರೂಪಕವನ್ನು ವಿದುಷಿ ಡಾ.ಗೀತಾರವರು ರಚಿಸಿದ್ದಾರೆ. ಸಂತ ತ್ಯಾಗರಾಜರ 30 ಕೃತಿಗಳಲ್ಲಿ ರಾಮಾಯಣದ ವಿವಿಧ ಪ್ರಸಂಗಗಳನ್ನು (ರಾಮನ ಜನನದಿಂದ ಪಟ್ಟಾಭಿಷೇಕದವರೆಗೆ) ಬಣ್ಣಿಸುವ ಈ ರೂಪಕದ ವಿಶೇಷತೆಯೆಂದರೆ ಡಾ.ಗೀತಾರವರು ಈ ಕೃತಿಗಳಿಗೆ ಕನ್ನಡರೂಪ ಕೊಟ್ಟಿದ್ದಾರೆ. ಮೂಲಕೃತಿಯ ಅದೇ ರಾಗ ತಾಳಗಳಲ್ಲಿ ಹಾಡುವಂತೆ ರಚಿಸಿದ್ದಾರೆ. ಪ್ರತಿ ಕೃತಿಗೂ ಮೊದಲು ಒಂದು ವ್ಯಾಖ್ಯಾನವನ್ನು ರಾಮಾಯಣದ ಪ್ರಸಂಗಗಳನ್ನು ವಿಷದೀಕರಿಸಿ ಹೇಳಲಾಗುವುದು. ಈ ಸಂಗೀತರೂಪಕಕ್ಕೆ ಸಮರ್ಥ ಪಿಟೀಲು ಮತ್ತು ಮೃದಂಗದ ಸಹಕಾರವಿದೆ. ರಾಮಾಯಣದ ಪ್ರಸಂಗಗಳ ಒಂದು ದೃಶ್ಯ ಪ್ರದರ್ಶನ ಈ ರೂಪಕದ ಮಹತ್ವ ಹೆಚ್ಚಿಸಿದೆ. ತೆಲುಗು, ಸಂಸ್ಕøತ ಭಾಷೆ ಬಾರದವರಿಗೆ ಈ ಅನುವಾದ ಅಪೇಕ್ಷಣೀಯ.
 • ಡಾ.ಗೀತಾ ಮೂರು ಸಂಗೀತ ಪ್ರಧಾನ ನಾಟಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪ್ರಸಿದ್ಧ ವಾಗ್ಗೇಯಕಾರರಾದ ಮಹಾರಾಜ ಸ್ವಾತಿ ತಿರುನಾಳ್, ವಿದ್ವಾನ್ ಟಿ.ಚೌಡಯ್ಯ ಮತ್ತು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‍ರವರ ಜೀವನ ಮತ್ತು ಸಾಧನೆಗಳು ಈ ನಾಟಕಗಳಲ್ಲಿ ಮೂಡಿಬಂದಿವೆ.
 • ಡಾ.ಗೀತಾರವರ ಕನ್ನಡ ನಾಟಕಗಳು ‘ಭೀಷ್ಮ’, ‘ಊರ್ಮಿಳಾ’ ಮತ್ತು ‘ಪರದೆ ಸರಿಸಿದಾಗ’ ಮೈಸೂರಿನ ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅವರ ಸಂಗೀತ ಪ್ರಧಾನ ನಾಟಕ ‘ಮಹಾಪ್ರಭು ಜಯಚಾಮರಾಜೇಂದ್ರ ದರ್ಶನ’ ಕೂಡ ರೇಡಿಯೋ ಪ್ರಸಾರವಾಗಿದೆ.
 • ಡಾ.ಗೀತಾ ಇನ್ನೂ ಪ್ರಕಟಗೊಳಿಸದೇ ಇರುವ ಐದು ಆಂಗ್ಲ ಕಿರುನಾಟಕಗಳನ್ನು ರಚಿಸಿದ್ದಾರೆ. ಅವುಗಳು (1) ಪುರಂದರದಾಸ: ದ ಗ್ರೇಟ್ ಹರಿದಾಸ (2) ಕಿತ್ತೂರು ರಾಣಿ ಚೆನ್ನಮ್ಮ (3) ಒನಕೆ ಓಬವ್ವ (4) ಝಾನ್ಸಿರಾಣಿ ಲಕ್ಷ್ಮೀಬಾಯಿ ಮತ್ತು (5) ಕೆಳದಿ ಚೆನ್ನಮ್ಮ.
 • ಡಾ.ಗೀತಾ, ತಮ್ಮ ಪತಿ ಯೋಗಾಚಾರ್ಯ ಡಾ.ಏ.ಆರ್.ಸೀತಾರಾಮ್‍ರವರೊಂದಿಗೆ ವಿದೇಶಯಾತ್ರೆ ಮಾಡಿ ‘ಅಚೀವಿಂಗ್ ಎಕ್ಸಲೆನ್ಸ್ ಥ್ರೂ ಯೋಗ ಅಂಡ್ ಮ್ಯೂಸಿಕ್’ (ಯೋಗ ಮತ್ತು ಸಂಗೀತದ ಮೂಲಕ ಮಾನವನ ಅಭ್ಯುದಯ) ಎಂಬ ವಿಷಯವನ್ನು ಕುರಿತು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅಲ್ಲದೆ, ವಿದುಷಿ ಡಾ.ಗೀತಾ ‘ಕೃಷ್ಣಾಮೃತ’, ಪಿಬರೇ ರಾಮರಸಂ’ ಹಾಗೂ ‘ಸಂಗೀತದಿಂದ ಆರೋಗ್ಯ’ ಮುಂತಾದ ವಿಷಯಗಳ ಕಾರ್ಯಾಗಾರ-ವನ್ನು ದೇಶ ಹಾಗೂ ವಿದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ.
 • ಡಾ.ಗೀತಾರವರು ಶಾರದಾ ಕಾಲೇಜ್ ಆಫ್ ಎಜುಕೇಷನ್, ಶ್ರೀ ಶಾರದಾ ಆಟ್ರ್ಸ್ ಮತ್ತು ಸೈನ್ಸ್ ಕಾಲೇಜು, ಉಳಂದೂರು ಪೇಟೆ, ತಮಿಳುನಾಡು; ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ, ತಿರುಪತಿ; ಭಾರತೀದಾಸನ್ ವಿಶ್ವವಿದ್ಯಾನಿಲಯ, ತಿರುಚ್ಚಿ; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು (ಗ್ರಂಥವಿಜ್ಞಾನ ವಿಭಾಗ); ಮತ್ತು ಗ್ರಂಥವಿಜ್ಞಾನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ; ಈ ಸಂಸ್ಥೆಗಳಿಗೆ ಆಹ್ವಾನಿತ ಉಪನ್ಯಾಸಕಿಯಾಗಿದ್ದಾರೆ.
 • ಡಾ.ಗೀತಾ ಸೀತಾರಾಮ್‍ರವರು ಕೇಂದ್ರ ಸರ್ಕಾರದಿಂದ ನಿವೃತ್ತರಾದ ಮೇಲೆ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ 2015ರಿಂದ ಉಪನ್ಯಾಸಕಿಯಾಗಿದ್ದಾರೆ. ಅವರು ಸಂಜೆಯ ಕಾಲೇಜಿನಲ್ಲಿ ಆರು ತಿಂಗಳ ಅವಧಿಯ ‘ಸರ್ಟಿಫಿಕೇಟ್ ಕೋರ್ಸ್’ ವಿದ್ಯಾರ್ಥಿಗಳಿಗೆ ‘ಭಕ್ತಿಸಂಗೀತ’ವನ್ನು ಬೋಧಿಸುತ್ತಾರೆ. ಈ ತರಗತಿಯಲ್ಲಿ ಕೃತಿಗಳು, ದೇವರನಾಮಗಳು, ಅಷ್ಟಪದಿಗಳು, ಭಜನ್, ವಚನ, ಭಾವಗೀತೆ ಮತ್ತು ಭಕ್ತಿಗೀತೆಗಳನ್ನು ಹೇಳಿಕೊಡಲಾಗುತ್ತದೆ.
 • ಡಾ.ಗೀತಾರವರು ‘ಗೀತಾಂಜಲಿ ಸ್ಕೂಲ್ ಆಫ್ ಫೈನ್ ಆಟ್ರ್ಸ್’ ಎಂಬ ಸ್ವಂತ ಸಂಗೀತ ಸಂಸ್ಥೆಯ ನಿರ್ದೇಶಕಿಯಾಗಿ ಕಳೆದ ನಲವತ್ತು ವರ್ಷಗಳಿಂದ ನಡೆಸುತ್ತಿದ್ದಾರೆ. ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಿಗೆ ತಮ್ಮ ವಿದ್ಯಾರ್ಥಿನಿಯರನ್ನು ತಯಾರು ಮಾಡುತ್ತಿದ್ದಾರೆ. ಅವರ ಸಂಸ್ಥೆಯ ಶಾಖೆಗಳು ಅಮೆರಿಕದ ಪೋರ್ಟ್‍ಲ್ಯಾಂಡ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿವೆ.
 • ‘ಡಾ.ಗೀತಾ ಸೀತಾರಾಮ್‍ರವರ ಗದ್ಯಸಾಹಿತ್ಯ ಒಂದು ವಿಮರ್ಶಾತ್ಮಕ ಅಧ್ಯಯನ’ ಎಂಬ ವಿಷಯವನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯವು ಎಂ.ಎ. ಮಹಾಪ್ರಬಂಧವಾಗಿ 2015ರಲ್ಲಿ ಪ್ರಕಟಿಸಿದೆ.
 • ವಿದುಷಿ ಡಾ.ಗೀತಾರವರು 9 ಧ್ವನಿಸುರುಳಿಗಳನ್ನು ತಾವೇ ಹಾಡಿಕೊಟ್ಟಿದ್ದಾರೆ. (ವಿವರಗಳಿಗೆ ಸಂಗೀತಾತ್ಮಕ ಪ್ರಕಟಣೆಗಳು 3 ರಿಂದ 11 ರವರೆಗೆ ನೋಡಿ). ಈ ಧ್ವನಿಸುರುಳಿಗಳೊಂದಿಗೆ ಸಾಹಿತ್ಯ ಹಾಗೂ ಸ್ವರಪ್ರಸ್ತಾರ ಸಹಿತ ಪುಸ್ತಕಗಳು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಲಭ್ಯವಿದೆ.
 • ಡಾ.ಗೀತಾ ಸೀತಾರಾಮ್‍ರವರಿಗೆ ‘ವಿಶ್ವೇಶ್ವರಯ್ಯ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ’; ‘ಪುಟ್ಟಣ್ಣ ಕಣಗಾಲ್ ಚಿತ್ರಕಥಾ ಪ್ರಶಸ್ತಿ’; ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆ ಪ್ರಶಸ್ತಿ’; ‘ಸಿ.ಎಸ್.ಐ.ಆರ್. ಪ್ರಶಸ್ತಿ’ (ಸಂಗೀತ ಸಂಯೋಜನೆಗೆ) ಮತ್ತು (ಗ್ರಂಥಾಲಯ ಓಪನ್ ಆ್ಯಕ್ಸಸ್ ಯತ್ನಗಳಿಗೆ); ಜೆ.ಎಸ್.ಎಸ್. ಸಂಗೀತ ಸಭೆಯ 2016ನೇ ಸಾಲಿನ ‘ಸಂಗೀತ ಶಾಸ್ತ್ರಜ್ಞೆ’ ಪ್ರಶಸ್ತಿ; ಹಾಗೂ ‘ಆಚಾರ್ಯ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿವೆ. ಬೆಂಗಳೂರಿನ ಲಯಾಭಿನಯ ಫೌಂಡೇಶನ್ ಇವರಿಗೆ ‘ನಾಟ್ಯ ಸಾಹಿತ್ಯ ಶಾರದೆ’ ಎಂಬ ಬಿರುದು ನೀಡಿ ಗೌರವಿಸಿದೆ
 • ವಿದುಷಿ ಡಾ.ಗೀತಾ ಸೀತಾರಾಮ್‍ರವರನ್ನು ಕೆಳಕಂಡ ಪ್ರಸಿದ್ಧ ಸಂಸ್ಥೆಗಳು ವಾಗ್ಗೇಯಕಾರ್ತಿಯಾಗಿ ಗುರುತಿಸಿವೆ. ಶಾಂತಲಾ ಅಕಾಡೆಮಿ, ಬೆಂಗಳೂರು; ನೃತ್ಯಾಲಯ ಟ್ರಸ್ಟ್, ಮೈಸೂರು; ಲಾಸ್ಯರಂಜನಿ ನೃತ್ಯಶಾಲೆ, ಮೈಸೂರು; ಸುರಭಿ ಟ್ರಸ್ಟ್, ಮೈಸೂರು; ಭೂಷಣ್ಸ್ ಅಕಾಡೆಮಿ, ಮೈಸೂರು; ಬ್ರಹ್ಮವಿದ್ಯಾ ಟ್ರಸ್ಟ್, ಮೈಸೂರು; ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ, ಮೈಸೂರು; ಭಾರತೀಯ ವಿದ್ಯಾಭವನ, ಮೈಸೂರು; ನಾದವಿದ್ಯಾಲಯ, ಮೈಸೂರು; ಮತ್ತು ನೂಪರ ಟ್ರಸ್ಟ್, ಮೈಸೂರು.
 • ಡಾ.ಗೀತಾರವರನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಗ್ರಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್, ಮೈಸೂರು ಮತ್ತು ಹಿಮಾಲಯ ಫೌಂಡೇಶನ್ಸ್, ಮೈಸೂರು, ಕಲಾವಿದೆಯಾಗಿ ಗೌರವಿಸಿದೆ.
 • ವಿದುಷಿ ಡಾ.ಗೀತಾ ಸೀತಾರಾಮ್‍ರವರು ಶಾಸ್ತ್ರೀಯ ಹಾಗೂ ಲಘುಶಾಸ್ತ್ರೀಯ ಕಲಾವಿದೆಯಾಗಿ ಇಪ್ಪತ್ತು ವರ್ಷಗಳಿಗೂ ಹೆಚ್ಚು ಮೈಸೂರು ಆಕಾಶವಾಣಿಯಲ್ಲಿ ಹಾಡಿದ್ದಾರೆ. ಅಲ್ಲದೆ ಇವರು ದೇಶಾದ್ಯಂತ ಹಾಗೂ ಅಮೆರಿಕ ಮತ್ತು ಯೂರೋಪ್‍ಗಳಲ್ಲಿ ಸಂಗೀತ ಕಛೇರಿಗಳನ್ನು, ಕಾರ್ಯಾಗಾರಗಳನ್ನು ನಡೆಸಿದ್ದಾರೆ.
 • ವಿದುಷಿ ಡಾ.ಗೀತಾರವರು ಜಯದೇವ ಅಷ್ಟಪದಿಗಳು; ಶ್ರೀ ಸದಾಶಿವ ಬ್ರಹ್ಮೇಂದ್ರರ ಕೃತಿಗಳು, ಡಿ.ವಿ.ಜಿ.ಯವರ ‘ಅಂತಃಪುರ ಗೀತೆಗಳು’, ರಾಷ್ಟ್ರಕವಿ ಕುವೆಂಪುರವರ ‘ರಾಮಾಯಣದರ್ಶನಂ’; ವಾಜಪೇಯಂ ಶ್ರೀರಂಗಾಚಾರ್‍ರವರ ‘ಸಿರಿನೋಂಪಿ’ (ಕನ್ನಡ ತಿರುಪ್ಪಾವೈ), ಶ್ರೀಮತಿ ಇಂದಿರಾ ಶೇಷಗಿರಿರಾವ್‍ರವರ ‘ಅರವಿಂದ ಪುಷ್ಪಮಾಲಾ’, ರಾಮಾಯಣದ ಕೃಷ್ಣಗಿರಿ ರಾಮಚಂದ್ರ-ರಾಯರ ಇಪ್ಪತ್ಕಾಲ್ಕು ರಾಗಗಳ ‘ರಾಮಾಯಣ ಮಂಗಳ’, ಹಾಗೂ ಅನೇಕ ದೇವರನಾಮಗಳು, ವಚನಗಳು ಮತ್ತು ಭಾವಗೀತೆಗಳಿಗೆ ಸಂಗೀತ (ರಾಗ-ಸ್ವರ) ಸಂಯೋಜನೆ ಮಾಡಿದ್ದಾರೆ.
 • ಡಾ.ಗೀತಾರವರು ‘ವಾಗ್ಗೇಯವೈಭವಂ’ ಎಂಬ ಎರಡು ದಿನಗಳ ಉತ್ಸವವನ್ನು 2013ರಲ್ಲಿ ತಮ್ಮ ಗೀತಾಂಜಲಿ ಸಂಗೀತ ಶಾಲೆಯ ಆಶ್ರಯದಲ್ಲಿ ಏರ್ಪಡಿಸಿದ್ದರು. ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ರವರ ಕೃತಿಗಳು ಹಾಗೂ ಡಾ.ಗೀತಾ ಸೀತಾರಾಮ್‍ರವರ ಕೃತಿಗಳನ್ನು ಆಧರಿಸಿದ ಸಂಗೀತ-ನೃತ್ಯ ಸ್ಪರ್ಧೆಗಳು ಹಾಗೂ ಕಛೇರಿಗಳನ್ನು ಏರ್ಪಡಿಸಲಾಗಿತ್ತು. ಇದು ಮಹಾರಾಜರ 90ನೇ ಜನ್ಮದಿನ ಹಾಗೂ ವಿದುಷಿ ಗೀತಾರವರ 60ನೇ ಜನ್ಮದಿನದ ಪ್ರಯುಕ್ತ ನಡೆಸಲಾಯಿತು.
 • ಡಾ.ಗೀತಾರವರಿಗೆ ಸಿ.ಎಫ್.ಟಿ.ಆರ್.ಐ. ಕಲಾಸ್ಪರ್ಧೆಗಳು; ಮೈಸೂರು ವಿಶ್ವವಿದ್ಯಾನಿಲಯದ ಸ್ಪರ್ಧೆಗಳು; ‘ರಿಮ್ಸೆ’ ಚರ್ಚಾಸ್ಪರ್ಧೆ; ಮಹಾರಾಣಿ ಸ್ತ್ರೀಯರ ಕಾಲೇಜಿನ ಸಂಗೀತ ಸ್ಪರ್ಧೆ; ಥಿಯೊಸಾಫಿಕಲ್ ಸೇವಾಕೇಂದ್ರದ ಸಂಗೀತಸ್ಪರ್ಧೆ; ಕುವೆಂಪು ಟ್ರಸ್ಟ್‍ನ ರಾಮಾಯಣ ದರ್ಶನಂ’ ಗಮಕಸ್ಪರ್ಧೆ; ಹಾಗೂ ಈಟಿವಿಯ ‘ಎದೆತುಂಬಿ ಹಾಡುವೆನು’ ಗಾಯನ ಸ್ಪರ್ಧೆಗಳ ತೀರ್ಪುಗಾರ್ತಿಯಾಗಿರುವ ಹೆಗ್ಗಳಿಕೆ ಸಂದಿದೆ.
 • ಡಾ.ಗೀತಾ ಸೀತಾರಾಮ್‍ರವರು ಸಿ.ಎಫ್.ಟಿ.ಆರ್.ಐ. ಸ್ತ್ರೀ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆಯಾಗಿದ್ದರು (2011). ಎಸ್.ಜೆ.ಸಿ.ಇ. ಯ ‘ಶಬ್ದ್’ ಕಲಾ ಉತ್ಸವ (2011); ಭೂಷಣ್ಸ್ ಅಕಾಡೆಮಿ ನೃತ್ಯೋತ್ಸವ (2013); ಭಾರತೀಯ ವಿದ್ಯಾರ್ಥಿ ಭವನ, ಕನಕದಾಸ ಜಯಂತಿ (2013); ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ (2008); ನಾದವಿದ್ಯಾಲಯ, ಮೈಸೂರು (2012); ಬ್ರಹ್ಮವಿದ್ಯಾಸಂಸ್ಥೆ (2014); ಮಹಿಳಾ ಮಹಾವಿದ್ಯಾಲಯ, ಉಳಂದೂರ್ ಪೇಟೆ (2016), ಮಹಾರಾಣಿ ವಿಜ್ಞಾನ ಕಾಲೇಜು, ಮೈಸೂರು (2017) ಕಲಾರಂಗ, ಬೆಂಗಳೂರು (2018) – ಈ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿದ್ದರು.
 • ಡಾ.ಗೀತಾ ಸೀತಾರಾಮ್‍ರವರನ್ನು ಅವರ ಪತಿ ಯೋಗಾಚಾರ್ಯ ಡಾ.ಏ.ಆರ್.ಸೀತಾರಾಮ್ ರವರೊಂದಿಗೆ ಉದಯ ಟಿವಿ ಈ ಕೆಳಕಂಡ ಕಾರ್ಯಕ್ರಮಗಳಲ್ಲಿ ಸಂದರ್ಶಿಸಿದೆ.
  • ಪರಿಚಯ (2004)
  • ಸಂವೇದನೆ (2009)
 • ವಿದುಷಿ ಡಾ.ಗೀತಾ ಸೀತಾರಾಮ್‍ರವರು ಕೆಳಗಿನವುಗಳಲ್ಲಿ ಉಲ್ಲೇಖಿತರಾಗಿದ್ದಾರೆ.
  • ಕರ್ನಾಟಕ ಮಹಿಳೆಯರು (ವಾಲ್ಯೂಮ್ 1)
  • ಸಿ.ಎಸ್.ಐ.ಆರ್. ವಿಜ್ಞಾನಿಗಳು
  • ಈ ಶತಮಾನದ ವಾಗ್ಗೇಯಕಾರರು
  • ರೆಫರೆನ್ಸ್ ಏಷ್ಯಾ (ಹೂ ಈಸ್ ಹೂ)
  • ಕರ್ನಾಟಕ ಸಂಗೀತ ದೀಪಿಕೆ
  • ಗೀತಾ ಭಾವಧಾರೆ: ಕರ್ನಾಟಕದ ಮಹಿಳಾ ವಾಗ್ಗೇಯಕಾರರ ಕೃತಿಗಳು (ಧ್ವನಿಸುರುಳಿ)
  • ಸಂಗೀತಾತ್ಮಕ ಚಿಂತನ ಸೌರಭ-ಉಲ್ಲೇಖಿತ ಅಧ್ಯಾಯ
  • ‘ಸುರಭಿ ಸಿಂಚನ’ ಮಾರ್ಚ್ 2015ರ ಸಂಚಿಕೆ-ಸಂದರ್ಶನ ಲೇಖನ
 • ಡಾ.ಗೀತಾ ಸೀತಾರಾಮ್‍ರವರು ಈ ಕೆಳಕಂಡ ಪ್ರಕಟಣೆಗಳಿಗೆ ತಮ್ಮ ಲೇಖನಗಳನ್ನು ನೀಡಿದ್ದಾರೆ.
  • ಕುವೆಂಪು ಮತ್ತು ಸಂಗೀತ (‘ಕುವೆಂಪು ದರ್ಶನ’-ಕುವೆಂಪು ಶತಮಾನೋತ್ಸವ ಗ್ರಂಥ), ಮೈಸೂರು ವಿಶ್ವವಿದ್ಯಾನಿಲಯ.
  • ‘ಗಾನವಿಹಾರ-ಒಂದು ನೋಟ’: ಏ.ಎಸ್.ಮೂರ್ತಿರಾವ್ ಸ್ಮರಣ ಗ್ರಂಥ, 2000.
  • ‘ನೀತಿಮಾಲಾ’-ಗಣಪತಿ ಸಚ್ಚಿದಾನಂದ ಸ್ವಾಮಿಗಳ ಉಪನ್ಯಾಸಗಳ ಕನ್ನಡ ಅನುವಾದ (ಭಕ್ತಿಮಾಲಾ ಪತ್ರಿಕೆಯಲ್ಲಿ ಅಚ್ಚಾಗಿದೆ) 2000.
  • ‘ಸಾಗರದಾಚೆ ಸಂಗೀತ-ಯೋಗ’: ಯೂರೋಪ್ ಪ್ರವಾಸ ಕಥನ-ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ (2007).
  • 22 ಸಂಗೀತ ರಚನೆಗಳ ಸಾರಾಂಶ, ಎಫ್.ಎ.ಕ್ಯೂ, ಗ್ಲಾಸರಿ ಹಾಗೂ ಕ್ವಿಜ್ ಪ್ರಶ್ನೆಗಳನ್ನು ‘ಆಂಗ್ಲ ಆನ್‍ಲೈನ್ ಪುಸ್ತಕ’ಕ್ಕಾಗಿ ಆಂಗ್ಲದಲ್ಲಿ ಬರೆದಿದ್ದಾರೆ (2017).
 • ಮೈಸೂರು ಆಕಾಶವಾಣಿಯ ‘ಮಹಿಳಾರಂಗ’ ಕಾರ್ಯಕ್ರಮದಲ್ಲಿ ಡಾ. ಗೀತಾರವರ ಸಂದರ್ಶನ 2018 ರಲ್ಲಿ ಮೂಡಿಬಂದಿದೆ
 • ಮೈಸೂರಿನ ಕುವೆಂಪು ಟ್ರಸ್ಟ್ ವತಯಿಂದ, 2019ರ ಶ್ರೀಮತಿ ಸಾವಿತ್ರಮ್ಮ ದೇಜಾಗೌ ಮಹಿಳಾ ಬರಹಗಾರರ ಪ್ರಶಸ್ತಿಯನ್ನು ನೀಡಲಾಗಿದೆ.